ನಮ್ಮ ದೇಶದಲ್ಲಿ70% ಮಳೆಯಾಶ್ರಿತ ಕೃಷಿ ಇದೆ. ಆದರೂ ರೈತರಿಗೆ ಮಳೆಯಾಶ್ರಿತ ಕೃಷಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿರುವ ಹಿನ್ನಲೆ ರೈತರು ಸಮಗ್ರ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಸಮಗ್ರ ಕೃಷಿಯಿಂದ ಹೆಚ್ಚಿನ ಲಾಭವನ್ನು ಕೂಡ ಪಡೆಯುತ್ತಿದ್ದಾರೆ. ಹೀಗಾಗಿ ಸಮಗ್ರ ಕೃಷಿ ಚಟುವಟಿಕೆ ಅಳವಡಿಸಿಕೊಳ್ಳುವ ಮೂಲಕ ರೈತರೊಬ್ಬರು ಯಶಸ್ಸು ಪಡೆದಿದ್ದಾರೆ. ಸಮಗ್ರ ಕೃಷಿ ವ್ಯವಸ್ಥೆಯ ಭಾಗವಾಗಿ ಕುರಿ, ಮೇಕೆ ಮತ್ತು ಕೋಳಿ ಸಾಕಾಣಿಕೆಯಲ್ಲಿ ತೊಡಗಿರುವ ಸಾಮಾನ್ಯ ಯುವಕನೊಬ್ಬ ಇಂದು ಲಕ್ಷದಲ್ಲಿ ಆದಾಯ ಪಡೆಯುತ್ತಿದ್ದಾರೆ. ಇಂದು ಲಕ್ಷ ಆದಾಯ ಪಡೆಯುತ್ತಿರುವವರು ಬಸವರಾಜ್ ಎಂಬವರು. ಇವರು ಮೂಲತ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನವರು. ಬಸವರಾಜ್ ಬದುಕು ಬದಲಾಯಿಸಿದ Boss Wallah
ಬಸವರಾಜ್ ಮೊದಲು ಮನೆಯಲ್ಲಿ ಕೋಳಿ ಸಾಕಣಿಕೆ ಮಾಡುತ್ತಿದ್ದರು. ಕೋಳಿ ಮರಿಗಳನ್ನು ತಂದು ಸಾಕಣಿಕೆ ಮಾಡಿ ದೊಡ್ಡದಾದ ಮೇಲೆ ಅವುಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಇವರಿಗೆ ಕೋಳಿ ಸಾಕಣಿಕೆ ಮತ್ತು ಅವುಗಳ ಮೊಟ್ಟೆಯಿಂದಲೂ ಉತ್ತಮ ಹೆಚ್ಚಿನ ಆದಾಯ ಗಳಿಸಬಹುದು ಎಂಬುವುದನ್ನು ಕಲಿಸಿಕೊಟ್ಟಿದ್ದು Boss Wallah. ಬಸವರಾಜ್ ಅವರು ಯುಟ್ಯೂಬ್ ನಲ್ಲಿ Boss wallah ಆ್ಯಡ್ ನೋಡಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ. Boss Wallah ಮೂಲಕ ಪ್ರೇರಣೆ ಪಡೆದು ಇಂದು ಕುರಿ, ಮೇಕೆ ಮತ್ತು ಕೋಳಿ ಸಾಕಣಿಕೆ ನಡೆಸಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಇವರು ವೃತ್ತಿಯಲ್ಲಿ ರೈತ ಆಗಿದ್ದರೂ ರೇಡಿಯಂ ಸ್ಟಿಕ್ಕರ್ ತಯಾರಿಕಾ ಕಾರ್ಖಾನೆಯಲ್ಲಿ ವಾಲ್ ಪೇಯಿಂಟ್ಗ್ ಕೆಲಸ ಮಾಡುತ್ತಿದ್ದರು. ಇಂದು ಬಸವರಾಜ್ 6-7 ತಿಂಗಳಿನಲ್ಲಿ 3 ಲಕ್ಷಗಳವರೆಗೆ ಆದಾಯ ಗಳಿಸುತ್ತಿದ್ದಾರೆ. ಬಸವರಾಜ್ ಇಂದು ಕುರಿ, ಮೇಕೆ, ಕೋಳಿ ಸಾಕಣಿಕೆಯಿಂದ ಉತ್ತಮ ಆದಾಯದ ಜೊತೆಗೆ ಯಾವ ರೀತಿಯಲ್ಲಿ ಈ ವ್ಯವಹಾರವನ್ನು ನಡೆಸಬೇಕು ಎಂಬುವುದನ್ನು ಸಂಪೂರ್ಣವಾಗಿ ಕಲಿತುಕೊಂಡಿದ್ದಾರೆ.
2-3 ಲಕ್ಷ ಆದಾಯ ಪಡೆಯುತ್ತಿದ್ದಾರೆ ಬಸವರಾಜ್
32 ವರ್ಷ ವಯಸ್ಸಿನ ಬಸವರಾಜ್ ಬಾಲ್ಯದಿಂದಲೂ ಕೃಷಿ ನೋಡಿ ಬೆಳೆದ ಇವರಿಗೆ ಕೃಷಿ ಮೇಲೆ ಹೆಚ್ಚು ಅಸಕ್ತಿ. ಈ ಕಾರಣಕ್ಕಾಗಿ ಅವರು ಮೂರು ವರ್ಷಗಳ ಹಿಂದೆ ಕೋಳಿ ಸಾಕಾಣಿಕೆಯನ್ನು ಪ್ರಾರಂಭಿಸಿದರು. ವಾಣಿಜ್ಯೋದ್ಯಮಿಗೆ ಶಿಕ್ಷಣ ಅತ್ಯಗತ್ಯ ಎಂದು ಜನರು ಹೇಳುತ್ತಾರೆ, ಆದರೆ ಬಸವರಾಜ್ ಪ್ರಕರಣದಲ್ಲಿ ಅದು ಸುಳ್ಳಾಯಿತು. ಅವರು ತನ್ನ ಪಿಯುಸಿಯನ್ನು ಪೂರ್ಣಗೊಳಿಸಲಿಲ್ಲ, ಆದರೆ ಅವರು ಕೋಳಿ ಸಾಕಣಿಕೆ ಮತ್ತು ಕುರಿ ಸಾಕಣಿಕೆಯಿಂದ ಇಂದು 2 ರಿಂದ ೩ ಲಕ್ಷ ಸಂಪಾದಿಸುತ್ತಾರೆ. Boss Wallah ನಲ್ಲಿ ಅವರು ಅವರು ಕೋಳಿ ಮತ್ತು ಕುರಿ ಮತ್ತು ಮೇಕೆ ಸಾಕಣೆಯ ಬಗ್ಗೆ ಜ್ಞಾನ ಮತ್ತು ಸೂಕ್ತ ಪ್ಲಾನ್ ಪಡೆದರು. ಈ ಕೋರ್ಸ್ಗಳಿಂದ ಪಡೆದ ಸಲಹೆಗಳನ್ನು ಬಳಸಿಕೊಂಡು ತಮ್ಮ ಕೃಷಿಯನ್ನು ಸುಧಾರಿಸಿದರು. ಕೋರ್ಸ್ನಿಂದ, ಅವರು ಬಂಡವಾಳ ಮತ್ತು ಹಣಕಾಸು, ಸರ್ಕಾರಿ ಬೆಂಬಲ, ನೋಂದಣಿ, ಮೂಲಸೌಕರ್ಯ, ಆಹಾರ ಸಂಗ್ರಹಣೆ, ಕೋಳಿ ಸಾಕಣೆ ಮತ್ತು ನಿರ್ವಹಣೆ, ವ್ಯಾಕ್ಸಿನೇಷನ್ ಮತ್ತು ರೋಗಗಳು, ಅಪಾಯ ನಿರ್ವಹಣೆ / ಸವಾಲುಗಳು, ಕಾರ್ಮಿಕ ಅವಶ್ಯಕತೆಗಳು, ಮಾರ್ಕೆಟಿಂಗ್ ಮತ್ತು ವಿತರಣೆ ಬಗ್ಗೆ ಕಲಿತುಕೊಂಡರು. ಪ್ರಸ್ತುತ ಅವರು 30 ಮೇಕೆ, 6 ರಿಂದ 7 ಕುರಿ, 35 ಕೋಳಿ ಮತ್ತು 4 ಸ್ವರ್ಣಧಾರ ಕೋಳಿಗಳನ್ನು ಸಾಕುತ್ತಿದ್ದಾರೆ. ಅವರು ಈ ಕೋರ್ಸ್ನ ಕಲಿಕೆಯಿಂದ ತನ್ನ 1 ಎಕರೆ ಭೂಮಿಯಲ್ಲಿ ಅವರು ತನ್ನ ಕೋಳಿ, ಕುರಿಗಳಿಗೆ ಶೆಡ್ ಅನ್ನು ರಚಿಸಿದ್ದಾರೆ.
ಎಲ್ಲಾ ಯುವಕರಿಗೂ ಸ್ಪೂರ್ತಿ ಬಸವರಾಜ್ ಸಾಧನೆ
ಇಂದು ಸಾಮಾನ್ಯ ಯುವಕನೂ ಕೂಡ ಕೃಷಿಯಲ್ಲಿ ತೊಡಗಿಸಿಕೊಂಡರೆ ಲಕ್ಷ ದುಡಿಯಬಹುದು ಎಂಬುವುದನ್ನು ಸಾಧಿಸಿ ತೋರಿಸಿದ್ದಾರೆ ಬಸವರಾಜ್ ಅವರು. ಇವರು ಸಮಗ್ರ ಕೃಷಿಯಲ್ಲಿ ತೊಡಗಿಕೊಂಡು ಇಂದು ಲಕ್ಷಗಳಲ್ಲಿ ಎಣಿಸಿ ಎಲ್ಲಾ ಯುವಕರಿಗೂ ಸ್ಪೂರ್ತಿಯಾಗಿದ್ದಾರೆ.
